-->

Responsive Ads

Responsive Ads



ತನ್ನ ಮೇಲೆ ಬಂದ ಆರೋಪದಿಂದ ಮುಕ್ತವಾಗಲು ಶಾಲಾ ಶಿಕ್ಷಕಿಯ ಮೇಲೆ ಬಂತು ದೇವರು



ನಾಡು ಮಾಹಿತಿ:

ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟ ಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಡಳಿತಾತ್ಮಕವಾಗಿ ಲೋಪ ಆಗಿದೆ ಎಂಬ ದೂರು ಬಂದ ಇನ್ನಲೇ ಇಂದು BEO ಶಾಲೆಗೆ ಭೇಟಿ ನೀಡಿದ್ದರು. ಭೇಟಿ ನೀಡಿದ ಬಳಿಕ ತನಿಖೆ ಆರಂಭವಾಗುತ್ತಿದ್ದಂತೆ ಶಾಲಾ ಮುಖ್ಯ ಶಿಕ್ಷಕಿ ದೇವರು ಬಂದಂತೆ ನಟಿಸಿದ್ದಾರೆ. ಕೂಡಲೇ ಮೂಡುಗೆರೆ BEO ಶಿಕ್ಷಕಿಯನ್ನು ತನಿಖೆ ನಡೆಸದೆ ಶಾಲೆಯಿಂದ ತೆರಳಿರುವ ಘಟನೆ ನಡೆದಿದೆ.

ಕೆಲವೊಮ್ಮೆ ನಮ್ಮ ಊಹೆಗೂ ಮೀರಿದ ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಅದರಂತೆ ಇದೀಗ ಸರ್ಕಾರಿ ಶಾಲೆಯ ಅಕ್ರಮವನ್ನು ಪ್ರಶ್ನೆ ಮಾಡಿದ್ದಕ್ಕೆ ಶಾಲಾ ಮುಖ್ಯ ಶಿಕ್ಷಕಿ ಲಲಿತಮ್ಮ ಎಂಬುವವರ ಮೈಮೇಲೆ ಏಕಾಏಕಿ ದೇವರು ಬಂದ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಘಟನೆ ನಡೆದಿದೆ. ಈ ವೇಳೆ ಮಾಜಿ ಸಚಿವ B.B ನಿಂಗಯ್ಯ ರಕ್ತಕರಿ ಸಾಯ್ತಾನೆ ಬಿಡಲ್ಲ ಅವರನ್ನು ಎಂಬ ಶಾಲಾ ಮುಖ್ಯ ಶಿಕ್ಷಕಿಯ ಮಾತು ಕೇಳಿ BEO ಹಾಗೂ ಇನ್ನಿತರ ಶಿಕ್ಷಕರು ತಬ್ಬಿಬ್ಬಾಗಿದ್ದಾರೆ.



ಶಾಲೆಗೆ ಭೇಟಿ ನೀಡಿದ್ದ BEO

ಸರ್ಕಾರಿ ಶಾಲೆಯಲ್ಲಿ ಆಡಳಿತಾತ್ಮಕವಾಗಿ ಲೋಪ ಉಂಟಾಗಿದೆ ಎಂಬ ದೂರು ಬಂದ ಹಿನ್ನೆಲೆ BEO ಶಾಲೆಗೆ ಭೇಟಿ ನೀಡಿದ್ದರು. ಬಳಿಕ ಶಾಲೆಯ ಕಡತಗಳ ಕುರಿತು ಮಾಹಿತಿ ಪಡೆಯಲು ಮುಂದಾಗುತ್ತಿದ್ದಂತೆ ಶಾಲಾ ಮುಖ್ಯ ಶಿಕ್ಷಕಿಯ ಮಾತಿನ ದಾಟಿ ದಿಢೀರ್ ಬದಲಾವಣೆಯಾಗಿ ಮೊದಲು ದೇವಸ್ಥಾನ ಕಟ್ಟಿ ನಂತರ ಶಾಲೆಯನ್ನು ನಡೆಸಿ, ಯಾರನ್ನು ಬಿಡಲ್ಲ 9 ಮಂದಿಯ ಜೀವ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಶಾಲಾ ಮುಖ್ಯ ಶಿಕ್ಷಕಿಯ ವಿಚಿತ್ರ ಮಾತಿನ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು BEO ತನಿಖೆ ನಡೆಸದೆ ಶಾಲೆಯಿಂದ ತೆರಳಿದ್ದಾರೆ.

ಹೌದು, ಕುಡಿಯುವ ನೀರು ಮತ್ತು ಶೌಚಾಲಯದ ಹಣ ದುರುಪಯೋಗದ ಆರೋಪ ಕೇಳಿ ಬಂದಿದ್ದ ಹಿನ್ನೆಲೆ ಶಾಲಾ ಮುಖ್ಯ ಶಿಕ್ಷಕಿ ಲಲಿತಮ್ಮ ಅವರನ್ನು ತನಿಖೆ ಮಾಡಲು ಮೂಡುಗೆರೆ ತಾಲೂಕಿನ BEO ಮತ್ತು ಸಿಬ್ಬಂದಿಗಳು ಶಾಲೆಗೆ ಆಗಮಿಸಿದ್ದರು. ಇನ್ನು ತನಿಖೆ ಆರಂಭವಾಗುತ್ತಿದ್ದಂತೆ ಶಾಲಾ ಮುಖ್ಯ ಶಿಕ್ಷಕಿ ದೇವರು ಬಂದಂತೆ ನಟಿಸಿದ್ದಾರೆ. ಕೂಡಲೇ ಮೂಡಿಗೆರೆ BEO ಶಿಕ್ಷಕಿಯನ್ನು ತನಿಖೆ ನಡೆಸದೆ ಶಾಲೆಯಿಂದ ತೆರಳಿದ್ದಾರೆ. ಇದೀಗ ಶಾಲಾ ಮುಖ್ಯ ಶಿಕ್ಷಕಿಯ ವರ್ತನೆಗೆ SDMC ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು ಶಾಲಾ ಮುಖ್ಯ ಶಿಕ್ಷಕಿಯ ವಿರುದ್ಧ SDMC ಅಧ್ಯಕ್ಷರು BEO ಗೆ ದೂರು ನೀಡಿದ್ದಾರೆ.


😊ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ😊

0 Response to ತನ್ನ ಮೇಲೆ ಬಂದ ಆರೋಪದಿಂದ ಮುಕ್ತವಾಗಲು ಶಾಲಾ ಶಿಕ್ಷಕಿಯ ಮೇಲೆ ಬಂತು ದೇವರು

Post a Comment

Advertise