-->

Responsive Ads

Responsive Ads



Government employee; ಪ್ರಭಾರ ಭತ್ಯೆ ಬಗ್ಗೆ ಸ್ಪಷ್ಟೀಕರಣ



ಬೆಂಗಳೂರು:

ಕರ್ನಾಟಕ ಸರ್ಕಾರ ಪ್ರಭಾರ ಭತ್ಯೆ ಮಂಜೂರಾತಿ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. ಸರ್ಕಾರಿ ಆದೇಶ ದಿನಾಂಕ 23/9/2022 ಉಲ್ಲೇಖಿಸಿ ಈ ಸ್ಪಷ್ಟೀಕರಣವನ್ನು ಕೊಡಲಾಗಿದೆ.


ಆಜಯ್ ಎಸ್. ಕೊರಡೆ ಸರ್ಕಾರದ ಅಧೀನ ಕಾರ್ಯದರ್ಶಿ, ಅರ್ಥಿಕ ಇಲಾಖೆ (ಸೇವೆಗಳು-1) ಈ ಕುರಿತು ಆದೇಶ ಹೊರಡಿಸಿದ್ದಾರೆ.


ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 32 ಮತ್ತು 68 ರಡಿಯಲ್ಲಿ ಸರ್ಕಾರಿ ನೌಕರರನ್ನು ಮತ್ತೊಂದು ಹುದ್ದೆಯ ಸ್ವತಂತ್ರ ಪ್ರಭಾರದಲ್ಲಿ ಅಥವಾ ಹೆಚ್ಚುವರಿ ಪ್ರಭಾರದಲ್ಲಿ ಇರಿಸಿದ ಸಂದರ್ಭದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 68 ರಲ್ಲಿ ತಿಳಿಸಿರುವಂತೆ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ ಎಂದು ಹೇಳಿದ್ದಾರೆ.


ಈ ಕುರಿತು ಹೊರಡಿಸಲಾಗಿರುವ ದಿನಾಂಕ 23/09/2022ರ ಸರ್ಕಾರಿ ಆದೇಶದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಸೃಷ್ಟೀಕರಣವನ್ನು ಕೋರುತ್ತಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಅಂಶಗಳನ್ನು ಸ್ಪಷ್ಟೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.


ಸ್ಪಷ್ಟೀಕರಣ ಹೀಗಿದೆ...

  1. ಪ್ರಭಾರ ಭತ್ಯೆಯು, ಪ್ರಭಾರದಲ್ಲಿರಿಸಲ್ಪಟ್ಟ ಅಧಿಕಾರಿಯು ಸೆಳೆಯುತ್ತಿರುವ ಮೂಲ ವೇತನದ ಮೇಲೆಯೇ ನಿರ್ಧರಿತವಾಗುತ್ತದೆ. ಇದು ಅದೇ ನಿಯಮಾವಳಿಯ ನಿಯಮ 32 ರಡಿಯಲ್ಲಿನ ಸ್ವತಂತ್ರ ಪ್ರಭಾರ ವ್ಯವಸ್ಥೆ ಮತ್ತು ನಿಯಮ 68 ರ ಟಿಪ್ಪಣಿ-1 ರಡಿ ಮಾಡಲಾದ ಹೆಚ್ಚುವರಿ ಪ್ರಭಾರ ವ್ಯವಸ್ಥೆಗಳ ಎರಡೂ ಸಂದರ್ಭಗಳಲ್ಲಿ ಅನ್ವಯವಾಗುತ್ತದೆ.
  2. ಪ್ರಭಾರ ಭತ್ಯೆಯು ಒಂದು ತಾತ್ಕಾಲಿಕ ಭತ್ಯೆಯಾಗಿದ್ದು, ಪ್ರಭಾರವನ್ನು ಹೊಂದಿದ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಇದು ಕರ್ನಾಟಕ ಆರ್ಥಿಕ ಸಂಹಿತೆಯ ಕಂಡಿಕೆ 99 ರಲ್ಲಿ ಉದ್ದೇಶಿತ ಸ್ಥಿರ ಭತ್ಯೆಯಾಗಿರುವುದಿಲ್ಲವಾದ್ದರಿಂದ ಈ ಭತ್ಯೆಯನ್ನು ಮಂಜೂರು ಮಾಡಲು ಮಹಾಲೇಖಪಾಲರು ಪ್ರಾಧಿಕರಿಸಬೇಕಾಗಿರುವುದಿಲ್ಲ.
  3. ದಿನಾಂಕ 31/08/2022ರ ವರೆಗಿನ ಪ್ರಭಾರದ ಅವಧಿಗೆ ದಿನಾಂಕ 30/04/2019ರ ಸರ್ಕಾರಿ ಅದೇಶ ಆಇ 8 ಎಸ್‌ಆರ್‌ಸ್ 2018 ಹಾಗೂ ದಿನಾಂಕ 25/11/2019ರ ಸರ್ಕಾರದ ಸುತ್ತೋಲೆ ಸಂಖ್ಯೆ ಆಇ 05 (ಇ) ಸೇನಿಸೇ 2019 ರಲ್ಲಿನ ಮಾರ್ಗಸೂಚಿ ಅನ್ವಯವಾಗುವುದಾಗಿದ್ದು, ದಿನಾಂಕ 01/09/2022 ರ ನಂತರದ ಪ್ರಭಾರದ ಅವಧಿಗೆ ಉಲ್ಲೇಖಿತ ದಿನಾಂಕ 23/09/2022ರ ಸರ್ಕಾರಿ ಅದೇಶದಲ್ಲಿನ ಮಾರ್ಗಸೂಚಿ- ಅನ್ವಯವಾಗುತ್ತದೆ.
  4. ಈಗಾಗಲೇ ಇತ್ಯರ್ಥಪಡಿಸಿರುವ ಪ್ರಕರಣಗಳಲ್ಲಿ ದಿನಾಂಕ 01/09/2022 ರ ನಂತರದ ಅವಧಿಯಲ್ಲಿ ಪ್ರಭಾರ ನಿರ್ವಹಿಸಿರುವ ಪ್ರಕರಣಗಳಿಗೆ ಶೇ.7.5 ರಷ್ಟು ದರದಲ್ಲಿ ಪ್ರಭಾರ ಭತ್ಯೆಯನ್ನು ಪಾವತಿಸಿರುವ ಪ್ರಕರಣಗಳಲ್ಲಿ ವ್ಯತ್ಯಾಸವನ್ನು ಪಾವತಿಸಬಹುದು.
  5. ಒಂದು ವೇಳೆ ಹೆಚ್ಚುವರಿಯಾಗಿ ಪ್ರಭಾರ ಭತ್ಯೆ ಪಾವತಿಯಾಗಿದ್ದಲ್ಲಿ, ಅದನ್ನು ಹಿಂಭರಿಸಿಕೊಳ್ಳುವ ಹಕ್ಕನ್ನು ಸರ್ಕಾರವು ಕಾಯ್ದಿರಿಸಿಕೊಂಡಿರುತ್ತದೆ ಎಂಬ ಷರತ್ತನ್ನು ಪ್ರಭಾರ ಭತ್ಯೆಯನ್ನು ಮಂಜೂರು ಮಾಡುವ ಆದೇಶದಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು.
  6. ನಿಯಮ 58 ರಡಿಯಲ್ಲಿನ ಪ್ರಭಾರ ವ್ಯವಸ್ಥೆಯ ಸಂದರ್ಭದಲ್ಲಿ ಸಾಧ್ಯವಾದಷ್ಟು ಸಂಬಂಧಿತ ನೌಕರರು ಪ್ರಭಾರ ಭತ್ಯೆಯನ್ನು ಕ್ಷಮು ಮಾಡಿದ ತಿಂಗಳ ವೇತನದ ಬಿಲ್ಲಿನೊಂದಿಗೆ ಕೈಮ್‌ನ್ನು ಇತ್ಯರ್ಥಪಡಿಸಿ ಪ್ರಭಾರ ಭತ್ಯೆಯ ಮೊತ್ತವನ್ನು ಪಾವತಿಸುವುದು.
  7. ಪ್ರಭಾರ ವ್ಯವಸ್ಥೆಯನ್ನು ಮಾಡುವ ಸಕ್ಷಮ ಪ್ರಾಧಿಕಾರಿಗಳು ಹಾಗೂ ಅವರ ಅಧಿಕಾರ- ವ್ಯಾಪ್ತಿಯಲ್ಲಿ ನಿಯಮ 68ರ ಟಿಪ್ಪಣಿ 8ರಲ್ಲಿ ತಿಳಿಸಲಾಗಿರುವ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದೆ.

0 Response to Government employee; ಪ್ರಭಾರ ಭತ್ಯೆ ಬಗ್ಗೆ ಸ್ಪಷ್ಟೀಕರಣ

Post a Comment

Advertise