ಮಂಗಳೂರು:
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ನೀಡಲಾಗಿದ್ದ ರಜೆಯನ್ನು ಸರಿದೂಗಿಸಲು ಇದೀಗ ಮುಂದಿನ 14 ಶನಿವಾರಗಳ ಕಾಲ ಇಡೀ ದಿನ ತರಗತಿ ನಡೆಸಲು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿದ್ದಾರೆ.
ಜುಲೈನಲ್ಲಿ ಸುರಿದ ಅತಿ ಹೆಚ್ಚು ಮಳೆಯಿಂದಾಗಿ ಜಿಲ್ಲೆಯ ಶಾಲೆಗಳಿಗೆ ಜಿಲ್ಲಾಧಿಕಾರಿಯ ನಿರ್ದೇಶನದಂತೆ ಏಳು ದಿನ ರಜೆ ಸಾರಲಾಗಿತ್ತು. ಆ ದಿನಗಳಿಂದ ವಿದ್ಯಾರ್ಥಿಗಳಿಗೆ ಆದ ನಷ್ಟವನ್ನು ಭರ್ತಿ ಮಾಡಲು14 ಶನಿವಾರಗಳಂದು ಇಡೀ ದಿನ ತರಗತಿ ನಡೆಸಲು ನಿರ್ಧರಿಸಲಾಗಿದೆ ಎಂದು ಉಪನಿರ್ದೇಶಕರು ತಿಳಿಸಿದ್ದಾರೆ.
0 Response to ಮಂಗಳೂರು - ಸೆಪ್ಟೆಂಬರ್ ನಿಂದ ಶನಿವಾರ ಇಡೀ ದಿನ ಶಾಲೆ
Post a Comment