-->

Responsive Ads

Responsive Ads



ಇಲ್ಲಿದೆ ʼಆರೋಗ್ಯʼಕರವಾದ ‌ʼಆಳವಿ ಲಡ್ಡುʼ ಮಾಡುವ ವಿಧಾನ




ಆಳವಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇದನ್ನು ತಿನ್ನಬಹುದು. ಇದನ್ನು ಸೇವಿಸುವುದರಿಂದ ಮಲಬದ್ಧತೆ, ಕೂದಲು ಉದುರುವಿಕೆ ಸಮಸ್ಯೆಗಳು ನಿವಾರಣೆಯಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.


ಬೇಕಾಗುವ ಸಾಮಗ್ರಿಗಳು:

¾ ಕಪ್ - ಆಳವಿ, 1 ಟೇಬಲ್ ಸ್ಪೂನ್ - ತುಪ್ಪ, ¼ ಕಪ್ - ರವೆ, ½ ಕಪ್ - ಬೆಲ್ಲದ ಪುಡಿ, 1 ಟೇಬಲ್ ಸ್ಪೂನ್ - ತೆಂಗಿನಕಾಯಿ ತುರಿ, ¼ ಕಪ್ - ಬಾದಾಮಿ ಚೂರುಗಳು.


ಮಾಡುವ ವಿಧಾನ:

ಆಳವಿ ಬೀಜಗಳನ್ನು ½ ಕಪ್ ನೀರಿನಲ್ಲಿ 3 ಗಂಟೆಗಳ ಕಾಲ ನೆನೆಸಿ ನಂತರ ಇದನ್ನು ಸೋಸಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ನಂತರ ಆಳವಿ ಸೇರಿಸಿ ಇದಕ್ಕೆ ಬೆಲ್ಲ, ರವೆ ಸೇರಿಸಿ 6 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.


ಬೆಲ್ಲ ಕರಗಿ ಎಳೆ ಪಾಕ ಬರುತ್ತಿದ್ದಂತೆ ತೆಂಗಿನಕಾಯಿ ತುರಿ ಬಾದಾಮಿ ಚೂರು ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಬಂದ್ ಮಾಡಿ. ನಂತರ ಇದು ತಣ್ಣಗಾದ ಮೇಲೆ ಉಂಡೆ ಕಟ್ಟಿ.

0 Response to ಇಲ್ಲಿದೆ ʼಆರೋಗ್ಯʼಕರವಾದ ‌ʼಆಳವಿ ಲಡ್ಡುʼ ಮಾಡುವ ವಿಧಾನ

Post a Comment

Advertise