-->

Responsive Ads

Responsive Ads



ಸರಕಾರದ ಆದೇಶ ಪಾಲಿಸದ ಶಿಕ್ಷಕರನ್ನು ಸೆವೆಯಿಂದ ಅಮಾನತ್ ಮಾಡಿ ಆದೇಶ ಮಾಡಿದ ಶಿಕ್ಷಣ ಇಲಾಖೆ. ಸಂವಿಧಾನಕ್ಕೆ ಇವರು ಕೊಡುವ ಗೌರವ ಇದೇನಾ?



ಕೊಪ್ಪಳ:

ತಾಲ್ಲೂಕಿನ ಹಿರೇಸಿಂಧೋಗಿಯ ಕರ್ನಾಟಕ ಪಬ್ಲಿಕ್‌ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ನಾಗರಾಜ ಸುನಗ ಅವರನ್ನು ಸೇವೆಯಿಂದ ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.ಆ. 15ರಂದು 77ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಹಿರೇಸಿಂಧೋಗಿಯ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಇಡದೇ ಅವರು ಧ್ವಜಾರೋಹಣ ಮಾಡಿದ್ದರು.

ಈ ಕುರಿತು ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತ ವಿಮೋಚನಾ ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಸಮಿತಿ, ಸಫಾಯಿ ಕರ್ಮಚಾರಿಗಳ ಆಯೋಗದ ಜಿಲ್ಲಾ ವಿಜಿಲೆನ್ಸ್‌ ತಂಡ, ರಾಜ್ಯ ಎಸ್‌ಸಿ, ಎಸ್‌ಟಿ ಅಲೆಮಾರಿ ಮಹಾಸಭಾ ಆಕ್ಷೇಪ ವ್ಯಕ್ತಪಡಿಸಿದ್ದವು.

‘ನಾಗರಾಜ ಸುನಗ ಅವರ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಇಲಾಖಾ ವಿಚಾರಣೆ ಕಾಯ್ದಿರಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಶ್ರೀಶೈಲ ಎಸ್. ಬಿರಾದಾರ್ ಆದೇಶದಲ್ಲಿ ತಿಳಿಸಿದ್ದಾರೆ.

0 Response to ಸರಕಾರದ ಆದೇಶ ಪಾಲಿಸದ ಶಿಕ್ಷಕರನ್ನು ಸೆವೆಯಿಂದ ಅಮಾನತ್ ಮಾಡಿ ಆದೇಶ ಮಾಡಿದ ಶಿಕ್ಷಣ ಇಲಾಖೆ. ಸಂವಿಧಾನಕ್ಕೆ ಇವರು ಕೊಡುವ ಗೌರವ ಇದೇನಾ?

Post a Comment

Advertise