ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಅತ್ಯಗತ್ಯ. ಪೌಷ್ಟಿಕಾಂಶವಿರುವ ಆಹಾರ ಎಂದರೆ ಸಮತೋಲಿತ ಆಹಾರಗಳಾದ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಾಳುಗಳು, ಒಣ ಹಣ್ಣುಗಳು, ಹಾಲು ಮುಂತಾದವುಗಳನ್ನು ಒಳಗೊಂಡಿದೆ. ನಮ್ಮ ದಿನನಿತ್ಯದ ಆಹಾರವಾಗಿ ಹಣ್ಣುಗಳನ್ನು ತಿನ್ನುವುದು ತುಂಬಾ ಒಳ್ಳೆಯದು.
ಸೀಸನ್ಗೆ ತಕ್ಕಂತೆ ಸಿಗುವ ಕೆಲವು ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಉತ್ತಮ ಪೋಷಣೆ ದೊರೆಯುತ್ತದೆ ಮತ್ತು ರೋಗನಿರೋಧಕ ಶಕ್ತಿ ಕೂಡ ಬಲಗೊಳ್ಳುತ್ತದೆ. ಏಕೆಂದರೆ ಹಣ್ಣುಗಳು ದೇಹಕ್ಕೆ ಅಗತ್ಯವಿರುವ ಹೆಚ್ಚಿನ ಪೋಷಕಾಂಶಗಳನ್ನು ನೀಡುತ್ತದೆ.
ಅಲ್ಲದೇ ಹಣ್ಣುಗಳು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಖನಿಜಗಳನ್ನು ಹೊಂದಿರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಫ್ರೀ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ಕೆಲ ಹಣ್ಣುಗಳ ಸೇವನೆಯಲ್ಲಿ ಅಪಾಯಕಾರಿಯಾಗಿದೆ. ಏಕೆಂದರೆ ಇದರಲ್ಲಿ ಸಕ್ಕರೆ ಅಂಶವಿರುತ್ತದೆ. ಅಷ್ಟಕ್ಕೂ ಆ ಹಣ್ಣುಗಳು ಯಾವುದು ಅಂತೀರಾ? ಹಾಗಾದ್ರೆ ಈ ಸ್ಟೋರಿ.
ಹಣ್ಣುಗಳು ನೈಸರ್ಗಿಕ ಸಕ್ಕರೆ ಅಂಶವನ್ನು ಹೊಂದಿರುತ್ತವೆ. ಹಾಗಾಗಿ ಹಣ್ಣುಗಳನ್ನು ತಿಂದ ನಂತರ ರಕ್ತದಲ್ಲಿನ ಸಕ್ಕರೆ ವೇಗವಾಗಿ ಹೆಚ್ಚಾಗುತ್ತದೆ. ಈ ಹಣ್ಣುಗಳನ್ನು ತಿನ್ನುವುದು ಮಧುಮೇಹಿಗಳಿಗೆ ಅಪಾಯಕಾರಿ ಆಗಿದೆ. ಅಲ್ಲದೇ, ತೂಕ ಹೆಚ್ಚಾಗುವ ಹಣ್ಣುಗಳನ್ನು ತಿನ್ನುವುದು ಕೆಲವರಿಗೆ ತೊಂದರೆಯಾಗಬಹುದು. ಈ ಹಿನ್ನೆಲೆ ಪೌಷ್ಟಿಕತಜ್ಞರು ಹಣ್ಣುಗಳ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಪರಿಶೀಲಿಸದೇ ತಿನ್ನಬಾರದು ಎಂದು ಸಲಹೆ ನೀಡುತ್ತಾರೆ.
ನಿರುದ್ಯೋಗಿ ಡಿಪ್ಲೋಮಾ, ಪದವೀಧರರಿಗೆ ಗುಡ್ ನ್ಯೂಸ್ : 'ಯುವನಿಧಿ' ಜಾರಿ ಬಗ್ಗೆ ಸಿಎಂ ಸ್ಪಷ್ಟನೆ
ಆಹಾರದಲ್ಲಿನ ಕಾರ್ಬೋಹೈಡ್ರೇಟ್ಗಳ ಪ್ರಮಾಣವನ್ನು ಗ್ಲೈಸೆಮಿಕ್ ಇಂಡೆಕ್ಸ್ನ ಸಹಾಯದಿಂದ ಅಳೆಯಲಾಗುತ್ತದೆ. ಅಲ್ಲದೇ, ಈ ಹಣ್ಣುಗಳನ್ನು ತಿಂದ ಬಳಿಕ ರಕ್ತದಲ್ಲಿನ ಸಕ್ಕರೆಯ ಅಂಶ ಎಷ್ಟು ವೇಗವಾಗಿ ಏರುತ್ತದೆ? ಸಾಮಾನ್ಯವಾಗಿ ಗ್ಲೈಸೆಮಿಕ್ ಇಂಡೆಕ್ಸ್ 55 ಕ್ಕಿಂತ ಕಡಿಮೆ ಇರುವ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ? ಯಾವ ಹಣ್ಣುಗಳಲ್ಲಿ ಸಕ್ಕರೆ ಹೆಚ್ಚಿರುತ್ತದೆ? ಇದು ರಕ್ತದಲ್ಲಿನ ಸಕ್ಕರೆಯ ಅಪಾಯವನ್ನು ಹೆಚ್ಚಿಸುತ್ತದೆಯೇ ಎಂಬುವುದನ್ನು ತಿಳಿಯೋಣ.
ಅಂಜೂರ: ಇದು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣಾಗಿದ್ದು, ದೇಹಕ್ಕೆ ತುಂಬಾ ಉಪಯುಕ್ತವಾಗಿದೆ. ದೈಹಿಕ ಶಕ್ತಿಯನ್ನು ಹೆಚ್ಚಿಸಲು ಅಂಜೂರವು ಪ್ರಯೋಜನಕಾರಿಯಾಗಿದೆ. ಆದರೆ ಅಂಜೂರದ ಹಣ್ಣುಗಳನ್ನು ಸೇವಿಸಿದರೆ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ವೇಗವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಮಧುಮೇಹ ಹೊಂದಿರುವವರು ಅಂಜೂರದ ಹಣ್ಣುಗಳನ್ನು ತಿನ್ನಬಾರದು ಎಂದು ಸಲಹೆ ನೀಡಲಾಗುತ್ತದೆ.
ದ್ರಾಕ್ಷಿ: ದ್ರಾಕ್ಷಿ ಆರೋಗ್ಯಕ್ಕೆ ಒಳ್ಳೆಯದು. ಇದು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ದ್ರಾಕ್ಷಿಯ ಸೇವನೆಯು ಪ್ರಯೋಜನಕಾರಿಯಾಗಿದ್ದು, ಇದರಲ್ಲಿರುವ ವಿಟಮಿನ್ ಸಿ ದೇಹದ ಪ್ರತಿರಕ್ಷೆಯನ್ನು ಹೆಚ್ಚಿಸುವಲ್ಲಿ ಉಪಯುಕ್ತವಾಗಿದೆ. ಆದರೆ ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುತ್ತದೆ. ಒಂದು ಕಪ್ ದ್ರಾಕ್ಷಿಯಲ್ಲಿ ಸುಮಾರು 23 ಗ್ರಾಂ ಸಕ್ಕರೆ ಇರುತ್ತದೆ. ಆದ್ದರಿಂದ, ಮಧುಮೇಹ ಇರುವವರು ದ್ರಾಕ್ಷಿಯನ್ನು ತಿನ್ನುವುದು ಅಪಾಯಕಾರಿ. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯನ್ನು ತ್ವರಿತವಾಗಿ ಹೆಚ್ಚಿಸಲು ಕಾರಣವಾಗಬಹುದು.
ಮಾವು: ಮಾವು ಎಲ್ಲರಿಗೂ ಪ್ರಿಯವಾದ ಹಣ್ಣು. ಇದನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಇದು ರುಚಿಯಷ್ಟೇ ಅಲ್ಲ, ದೇಹಕ್ಕೂ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಜೊತೆಗೆ ಇತರ ಪೌಷ್ಟಿಕಾಂಶದ ಅಂಶಗಳಿವೆ. ಇದು ವಿಟಮಿನ್ ಎ ಅನ್ನು ಸಹ ಒಳಗೊಂಡಿದೆ. ಆದರೆ ಮಾವಿನಹಣ್ಣಿನಲ್ಲಿ ಸಕ್ಕರೆಯ ಪ್ರಮಾಣ ಅತಿ ಹೆಚ್ಚಾಗಿರುತ್ತದೆ. ಒಂದು ಮಾವಿನ ಹಣ್ಣಿನಲ್ಲಿ ಸುಮಾರು 46 ಗ್ರಾಂ ಸಕ್ಕರೆ ಇರುತ್ತದೆ. ಆದ್ದರಿಂದ ಮಧುಮೇಹಿಗಳು ಮಾವಿನಹಣ್ಣನ್ನು ಸೇವಿಸಿದರೆ, ರಕ್ತದಲ್ಲಿನ ಸಕ್ಕರೆಯು ತ್ವರಿತವಾಗಿ ಹೆಚ್ಚಾಗುತ್ತದೆ. ಅಲ್ಲದೇ, ಮಧುಮೇಹ ಇಲ್ಲದವರೂ ಮಾವಿನ ಹಣ್ಣುಗಳನ್ನು ಹೆಚ್ಚು ತಿಂದರೆ ತೂಕ ಹೆಚ್ಚಾಗುವ ಅಪಾಯವಿದೆ.
ಆದ್ದರಿಂದ, ಮಧುಮೇಹಿಗಳು ಮತ್ತು ಸ್ಥೂಲಕಾಯತೆ ಹೊಂದಿರುವವರು ತಮ್ಮ ಆಹಾರವಾಗಿ ಈ ಹಣ್ಣುಗಳನ್ನು ಸೇವಿಸುವ ಮುನ್ನ ಆಹಾರ ತಜ್ಞರು ಅಥವಾ ಅವರ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ನಿಮ್ಮ ಆರೋಗ್ಯಕ್ಕೆ ಸರಿಹೊಂದುವ ಹಣ್ಣುಗಳನ್ನು ಸೇವಿಸಿ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ನಾಡುಮಾಹಿತಿಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನಾಡು ಮಾಹಿತಿ ಇದಕ್ಕೆ ಜವಾಬ್ದಾರಿಯಲ್ಲ)
0 Response to ನಿಮಗೆ ಶುಗರ್ ಇದ್ಯಾ? ಹಾಗಾದ್ರೆ ಅಪ್ಪಿತಪ್ಪಿಯೂ ಈ ಹಣ್ಣುಗಳನ್ನು ಮಾತ್ರ ತಿನ್ನಬೇಡಿ
Post a Comment