-->

Responsive Ads

Responsive Ads



ನಿಮ್ಮ ನಂಬರ್​ಗೆ ರಿಚಾರ್ಜ್ ಮಾಡದಿದ್ರೆ ಎಷ್ಟು ದಿನಗಳಲ್ಲಿ ಆ ನಂಬರ್ ಬೇರೆಯವರಿಗೆ ನೀಡಲಾಗುತ್ತದೆ...?


ಟೆಲಿಕಾಂ ನಿಯಮದಂತೆ ನಿರ್ಧಿಷ್ಟ ಅವದಿಯ ಒಳಗೆ ಒಂದು ಸಿಮ್​ಗೆ ರಿಚಾರ್ಜ್ ಮಾಡಿಲ್ಲ ಎಂದಾದರೆ ಆ ಸಂಖ್ಯೆಯನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಲಾಗುತ್ತದೆ. ಆದರೆ, ಹೆಚ್ಚಿನ ಜನರು ಹೀಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಡ್ಯುಯಲ್ ಸಿಮ್  ಬಳಸುವುದು ಮಾಮೂಲಾಗಿದೆ. ಒಂದು ಸಿಮ್ ಅನ್ನು ತನ್ನ ವೈಯಕ್ತಿಕ ಅಥವಾ ಕುಟುಂಬಕ್ಕಾಗಿ ಇಟ್ಟಿದ್ದರೆ ಇನ್ನೊಂದು ಸಿಮ್ ಅನ್ನು ಕೆಲಸದ ವಿಚಾರಕ್ಕೆಂದು ಇಟ್ಟುಕೊಂಡಿರುತ್ತಾರೆ. ಕೆಲವರು ಮೂರು, ನಾಲ್ಕು ಸಿಮ್ ಅನ್ನು ಕೂಡ ಬಳಸುವವರಿದ್ದಾರೆ. ಹೆಚ್ಚಿನವರು ವೈಯಕ್ತಿಕ ಸಿಮ್ ಅಥವಾ ತುರ್ತು ಸಮಯಕ್ಕೆಂದು ಇಟ್ಟಿರುವ ಸಿಮ್​ಗೆ ರಿಚಾರ್ಜ್ ಮಾಡಲು ಮರೆತುಬಿಡುತ್ತಾರೆ.

ಇಂದು ಮೊಬೈಲ್  ರಿಚಾರ್ಜ್ ಬೆಲೆ ಗಗನಕ್ಕೇರಿರುವುದು ಕೂಡ ಇದಕ್ಕೊಂದು ಕಾರಣ. ಆದರೆ, ನೀವು ಹೀಗೆ ರಿಚಾರ್ಜ್ ಮಾಡದೆ ಸಿಮ್ ಅನ್ನು ಇಟ್ಟರೆ ಅದನ್ನು ಕಂಪನಿ ಬ್ಲಾಕ್ ಮಾಡುತ್ತದೆ. ಬಳಿಕ ಆ ನಂಬರ್ ಅನ್ನು ಇನ್ನೊಬ್ಬರಿಗೆ ನೀಡಲಾಗುತ್ತದೆ.

ಸರ್ಕಾರಿ ಉದ್ಯೋಗ, ಪದವೀಧರರಿಗೆ ಇಲ್ಲಿದೆ ಸುವರ್ಣಾವಕಾಶ

ಟೆಲಿಕಾಂ ನಿಯಮದಂತೆ ನಿರ್ಧಿಷ್ಟ ಅವದಿಯ ಒಳಗೆ ಒಂದು ಸಿಮ್​ಗೆ ರಿಚಾರ್ಜ್ ಮಾಡಿಲ್ಲ ಎಂದಾದರೆ ಆ ಸಂಖ್ಯೆಯನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಲಾಗುತ್ತದೆ. ಆದರೆ, ಹೆಚ್ಚಿನ ಜನರು ಹೀಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಏಕೆಂದರೆ, ಕೆಲವರಿಗೆ ಆ ಸಂಖ್ಯೆಯು ವಿಶೇಷವಾಗಿರುತ್ತದೆ ಅಥವಾ ಪ್ರಮುಖ ಕೆಲಸಗಳಿಗೆ ಆ ನಂಬರ್ ನೀಡಿರುತ್ತಾರೆ. ಹಾಗಾದರೆ ನೀವು ನಿಮ್ಮ ಸಿಮ್​ಗೆ ರಿಚಾರ್ಜ್ ಮಾಡದಿದ್ದರೆ ಕಂಪನಿ ಎಷ್ಟು ದಿನಗಳಲ್ಲಿ ಬೇರೆಯವರಿಗೆ ಆ ನಂಬರ್ ನೀಡುತ್ತದೆ ಎಂಬುದನ್ನು ನೋಡೋಣ.

ನೀವು ನಿಮ್ಮ ಸಿಮ್​ಗೆ ರಿಚಾರ್ಜ್ ಮಾಡಿಲ್ಲ ಎಂದಾದರೆ ಆ ಸಿಮ್ ನಂಬರ್ ಅನ್ನು ಬೇರೆಯವರಿಗೆ ವರ್ಗಾವಣೆ ಮಾಡುವ ಮೊದಲು ಕಂಪನಿಗಳು ಹಲವಾರು ಪ್ರಮುಖ ಕೆಲಸಗಳನ್ನು ಮಾಡುತ್ತವೆ. ಮೊದಲನೆಯದಾಗಿ, ನೀವು 60 ದಿನಗಳವರೆಗೆ ಸಿಮ್ ಅನ್ನು ರಿಚಾರ್ಜ್ ಮಾಡದಿದ್ದಾಗ ಅದು ನಿಷ್ಕ್ರಿಯಗೊಳ್ಳುತ್ತದೆ. ಇದಾದ ಬಳಿಕ ಪುನಃ ರಿಚಾರ್ಜ್ ಮಾಡಲೆಂದು 6 ರಿಂದ 9 ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಸಂದರ್ಭ ನೀವು ಆ ಸಂಖ್ಯೆಯನ್ನು ರೀಚಾರ್ಜ್ ಮಾಡಿ ಮತ್ತೆ ಸಕ್ರಿಯಗೊಳಿಸಬಹುದು.

ನಂತರವೂ ನೀವು ಸಿಮ್ ಬಳಸದಿದ್ದರೆ, ಕಂಪನಿಯು ಹಲವಾರು ಎಚ್ಚರಿಕೆಗಳನ್ನು ನೀಡುತ್ತದೆ. ಅಂತಿಮವಾಗಿ ಕಂಪನಿಯು ಸಿಮ್ ಬ್ಲಾಕ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ನಂತರ ಕೆಲವೇ ತಿಂಗಳುಗಳಲ್ಲಿ ಈ ಸಿಮ್ ಸಂಖ್ಯೆಯನ್ನು ಇನ್ನೊಬ್ಬ ಬಳಕೆದಾರರಿಗೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಯು ಸುಮಾರು ಒಂದು ವರ್ಷ ತೆಗೆದುಕೊಳ್ಳುತ್ತದೆ. ಅಂದರೆ ಒಬ್ಬರಿಂದ ಇನ್ನೊಬ್ಬರಿಗೆ ಸಿಮ್ ಅನ್ನು ವರ್ಗಾಯಿಸಲು ಒಂದು ವರ್ಷ ಕಾಲಾವಕಾಶ ಬೇಕಾಗುತ್ತದೆ.

0 Response to ನಿಮ್ಮ ನಂಬರ್​ಗೆ ರಿಚಾರ್ಜ್ ಮಾಡದಿದ್ರೆ ಎಷ್ಟು ದಿನಗಳಲ್ಲಿ ಆ ನಂಬರ್ ಬೇರೆಯವರಿಗೆ ನೀಡಲಾಗುತ್ತದೆ...?

Post a Comment

Advertise