-->

Responsive Ads

Responsive Ads



ರಾಜ್ಯ ಹಣಕಾಸು ಇಲಾಖೆ ನೇಮಕಾತಿ- ಅರ್ಜಿ ಹಾಕಲು ನಾಳೆಯೇ ಲಾಸ್ಟ್​ ಡೇಟ್


KSFC Recruitment 2023: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (Karnataka State Financial Corporation) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 41 ಡೆಪ್ಯುಟಿ ಮ್ಯಾನೇಜರ್(ಟೆಕ್ನಿಕಲ್), ಡೆಪ್ಯುಟಿ ಮ್ಯಾನೇಜರ್ (ಲೀಗಲ್) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ರಾಜ್ಯ ಸರ್ಕಾರದ ಕೆಲಸ ಬೇಕು ಎಂದು ಹಂಬಲಿಸುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಜುಲೈ 7, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆಫ್​ಲೈನ್ (Offline) ಮೂಲಕ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಅಭ್ಯರ್ಥಿಗಳು ಅರ್ಜಿ ಹಾಕುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.


ಹುದ್ದೆಯ ಮಾಹಿತಿ

1). ಡೆಪ್ಯುಟಿ ಮ್ಯಾನೇಜರ್(ಟೆಕ್ನಿಕಲ್) -11

2). ಡೆಪ್ಯುಟಿ ಮ್ಯಾನೇಜರ್ (ಲೀಗಲ್)- 18

3). ಡೆಪ್ಯುಟಿ ಮ್ಯಾನೇಜರ್ (ಫೈನಾನ್ಸ್​ & ಅಕೌಂಟ್ಸ್​)- 12


ವಿದ್ಯಾರ್ಹತೆ

1). ಡೆಪ್ಯುಟಿ ಮ್ಯಾನೇಜರ್(ಟೆಕ್ನಿಕಲ್) - ಎಂಜಿನಿಯರಿಂಗ್ ಪದವಿ

2). ಡೆಪ್ಯುಟಿ ಮ್ಯಾನೇಜರ್ (ಲೀಗಲ್)- ಕಾನೂನಿನಲ್ಲಿ ಪದವಿ

3). ಡೆಪ್ಯುಟಿ ಮ್ಯಾನೇಜರ್ (ಫೈನಾನ್ಸ್​ & ಅಕೌಂಟ್ಸ್​)- ACA, ICWA,ಎಂಬಿಎ, ಎಂ.ಕಾಂ, CFA, PGDMA


ವಯೋಮಿತಿ

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 25 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ

1). ಪ್ರವರ್ಗ 2ಎ/2ಬಿ/3ಎ &3ಬಿ ಅಭ್ಯರ್ಥಿಗಳು-3 ವರ್ಷ

2). SC/STಪ್ರವರ್ಗ-1 ಅಭ್ಯರ್ಥಿಗಳು-5 ವರ್ಷ

3). PWD/ ವಿಧವಾ ಅಭ್ಯರ್ಥಿಗಳು-10 ವರ್ಷ


ಅರ್ಜಿ ಶುಲ್ಕ

1). SC/ST ಅಭ್ಯರ್ಥಿಗಳು- 1500 ರೂ.

2). ಪ್ರವರ್ಗ-1/ 2ಎ/2ಬಿ/3ಎ &3ಬಿ ಅಭ್ಯರ್ಥಿಗಳು- 2000 ರೂ.

3). ಪಾವತಿಸುವ ಬಗೆ- ಡಿಮ್ಯಾಂಡ್ ಡ್ರಾಫ್ಟ್​


ವೇತನ

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 52,650-97,100 ರೂ. ಸಂಬಳ ಕೊಡಲಾಗುತ್ತದೆ.


ಉದ್ಯೋಗದ ಸ್ಥಳ

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಆಯ್ಕೆ ಪ್ರಕ್ರಿಯೆ

1). ಲಿಖಿತ ಪರೀಕ್ಷೆ

2). ವೈವಾ ವೋಸ್ ಟೆಸ್ಟ್​

3). ಸಂದರ್ಶನ


ಅರ್ಜಿ ಹಾಕೋದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


ವ್ಯವಸ್ಥಾಪಕ ನಿರ್ದೇಶಕರು

ಕೆಎಸ್‌ಎಫ್‌ಸಿ ಕೇಂದ್ರ ಕಚೇರಿ

ಕೆಎಸ್‌ಎಫ್‌ಸಿ ಭವನ

ನಂ.1/1

ತಿಮ್ಮಯ್ಯ ರಸ್ತೆ

ಬೆಂಗಳೂರು-560052


ಪ್ರಮುಖ ದಿನಾಂಕಗಳು

1). ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14/06/2023

2). ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 7, 2023


ಹೆಚ್ಚಿನ ವಿವರಗಳಿಗಾಗಿ ಸಹಾಯವಾಣಿ ಸಂಖ್ಯೆ 080 22282507 ಗೆ ಕರೆ ಮಾಡಿ.

0 Response to ರಾಜ್ಯ ಹಣಕಾಸು ಇಲಾಖೆ ನೇಮಕಾತಿ- ಅರ್ಜಿ ಹಾಕಲು ನಾಳೆಯೇ ಲಾಸ್ಟ್​ ಡೇಟ್

Post a Comment

Advertise