-->

Responsive Ads

Responsive Adsಕಾಯಂ ನೇಮಕಾತಿ ನಿರೀಕ್ಷೆಯಲ್ಲಿದ್ದ ಅತಿಥಿ ಶಿಕ್ಷಕರಿಗೆ ಬಿಗ್ ಶಾಕ್..!ಬೆಂಗಳೂರು: ಕಾಯಂ ನಿರೀಕ್ಷೆಯಲ್ಲಿದ್ದ ಅತಿಥಿ ಶಿಕ್ಷಕರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಾಕ್ ನೀಡಿದ್ದು, ಅತಿಥಿ ಶಿಕ್ಷಕರನ್ನು ಕಾಯಂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.


ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಕೆ.ವೈ.ನಂಜೇಗೌಡರು, ರಾಜ್ಯದಲ್ಲಿ 33 ಸಾವಿರ ಅತಿಥಿ ಶಿಕ್ಷಕರು ಇದ್ದಾರೆ. ಇವರನ್ನು ಕಾಯಂ ಮಾಡಬೇಕು. ಅತಿಥಿ ಶಿಕ್ಷಕರಿಗೆ ಕನಿಷ್ಠ ವೇತನ ನಿಯಮದಡಿ ವೇತನ ನೀಡಬೇಕು. ತಿಂಗಳಿಗೆ 10,000 ರೂ. ದಿಂದ 15,000 ರೂ.ವರೆಗೆ ಕನಿಷ್ಠ ವೇತನ ನೀಡಬೇಕು ಒತ್ತಾಯಿಸಿದರು.

ಸಂಭ್ರಮ ಶನಿವಾರ: ಶಾಲಾ ಮಕ್ಕಳಿಗೆ 'ಬ್ಯಾಗ್ ರಹಿತ ದಿನ' ಆಚರಣೆ ಬಗ್ಗೆ ಮಹತ್ವದ ಸುತ್ತೋಲೆ


ಶಾಸಕ ಕೆ.ವೈ ನಂಜೇಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಅತಿಥಿ ಶಿಕ್ಷಕರನ್ನು ಕಾಯಂ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆಯೂ ಇಲ್ಲ. ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ನ್ಯಾಯಾಲಯದ ತಡೆಯಾಜ್ಞೆ ಇದೆ. ತೆರವುಗೊಂಡ ಬಳಿಕ ನೇಮಕಾತಿ ಪ್ರಕ್ರಿಯೆ ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.

0 Response to ಕಾಯಂ ನೇಮಕಾತಿ ನಿರೀಕ್ಷೆಯಲ್ಲಿದ್ದ ಅತಿಥಿ ಶಿಕ್ಷಕರಿಗೆ ಬಿಗ್ ಶಾಕ್..!

Post a Comment

Advertise