ಪ್ರತಿ ತಿಂಗಳ 1ನೇ ತಾರೀಖಿನಂದು, ಗ್ಯಾಸ್ ಸಿಲಿಂಡರ್ಗಳ ಬೆಲೆಗಳು ಬದಲಾಗುತ್ತವೆ. ಈ ಬೆಲೆಗಳು ಅಂತರರಾಷ್ಟ್ರೀಯ ಕಚ್ಚಾ ತೈಲ ದರಗಳನ್ನ ಅವಲಂಬಿಸಿರುತ್ತದೆ. ಅದ್ರಂತೆ, ಈ ತಿಂಗಳು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಆದ್ರೂ ತೈಲ ಕಂಪನಿಗಳು ಗ್ರಾಹಕರಿಗೆ ಒಳ್ಳೆಯ ಸುದ್ದಿಯನ್ನ ನೀಡಿದ್ದು, ಇನ್ಮುಂದೆ ಗ್ಯಾಸ್ ಸಿಲಿಂಡರ್ ಬೆಲೆ ಕೇವಲ 820 ರೂಪಾಯಿಗೆ ತೆಗೆದುಕೊಳ್ಳಬಹುದು. ಹೇಗೆ ಅಂತಾ ಯೋಚಿಸುತ್ತಿದ್ದೀರಾ.? ಮುಂದೆ ಓದಿ.
ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ
ತೈಲ ಕಂಪನಿಗಳು ಈಗ ಹೊಸ ಗ್ಯಾಸ್ ಸಿಲಿಂಡರ್ಗಳನ್ನ ನೀಡುತ್ತಿವೆ. ಅವುಗಳೆಂದರೆ ಸಂಯೋಜಿತ ಅನಿಲ ಸಿಲಿಂಡರ್'ಗಳು. ಇದು ಸಾಮಾನ್ಯ ಸಿಲಿಂಡರ್'ಗಳಿಗಿಂತ ಕಡಿಮೆ ತೂಕವನ್ನ ಹೊಂದಿದೆ. ಇದು ಪಾರದರ್ಶಕವಾಗಿದ್ದು, ಮಹಿಳೆಯರಿಗೆ ಹೊಂದಿಕೊಳ್ಳಲು ಸುಲಭವಾಗಿದೆ. ಹೌದು, ಸಾಮಾನ್ಯ ಗ್ಯಾಸ್ ಸಿಲಿಂಡರ್ 14.2 ಕೆಜಿ ಅನಿಲವನ್ನ ಹೊಂದಿದ್ದು, ಅವುಗಳ ಪ್ರಸ್ತುತ ಬೆಲೆ 1155 ರೂಪಾಯಿ ಆಗಿದೆ.
ಇನ್ನು ಈ ಸಂಯೋಜಿತ ಸಿಲಿಂಡರ್ 10 ಕೆಜಿ ಅನಿಲವನ್ನ ಹೊಂದಿದ್ದು, ಈ ಸಿಲಿಂಡರ್ ಬೆಲೆ 820 ರೂಪಾಯಿ ಆಗಿದೆ. ಸಾಮಾನ್ಯ ಗ್ಯಾಸ್ ಸಿಲಿಂಡರ್ ಬೆಲೆಗೆ ಹೋಲಿಸಿದರೆ ಇದು ಸ್ವಲ್ಪ ಅಗ್ಗವಾಗಿರುವುದರಿಂದ ಗ್ರಾಹಕರಿಗೆ ಸ್ವಲ್ಪ ಪರಿಹಾರ ಸಿಗುತ್ತದೆ. ಪ್ರಸ್ತುತ ಈ ಹೊಸ ರೀತಿಯ ಗ್ಯಾಸ್ ಸಿಲಿಂಡರ್'ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ಈ ಸೌಲಭ್ಯವು ಕೆಲವೇ ಜನರಿಗೆ ಮಾತ್ರ ಲಭ್ಯವಿದೆ.
0 Response to ಗೃಹಿಣಿಯರಿಗೆ ಗುಡ್ ನ್ಯೂಸ್ ; ಕೇವಲ ₹820 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಲಭ್ಯ
Post a Comment