7ನೇ ವೇತನ ಆಯೋಗ ಹಾಗೂ NPS ಜಾರಿಗೆ ವಿಚಾರದಲ್ಲಿ ಷಡಕ್ಷರಿ ಅವರ ಮಹತ್ವದ ಹೇಳಿಕೆ, ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರು ಹೇಳಿದ್ದೇನು ಗೊತ್ತಾ...?
ರಾಜ್ಯ ಸರ್ಕಾರದ ಹೊಸ ಯೋಜನೆಗಳನ್ನು ಸರ್ಕಾರಿ ನೌಕರರು, ಅಧಿಕಾರಿಗಳು ಅನುಷ್ಠಾನಗೊಳಿಸಿ ಯಶಸ್ಸಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದರು.
ರಾಜ್ಯದ ಶಾಸಕರು, ಸಂಸದರು, ಜನಪ್ರತಿನಿಧಿಗಳಿಗೆ ರಾಜ್ಯ ಸರ್ಕಾರಿ ನೌಕರರು ಸಹಕಾರ ಕೊಡುವುದರ ಮೂಲಕ ಸರ್ಕಾರದ ಯೋಜನೆಗಳ ಯಶಸ್ಸಿನಲ್ಲಿ ನೌಕರರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಪ್ರಾಮಾಣಿಕವಾಗಿ ಬದ್ಧತೆಯಿಂದ ಸಮಾಜದ ಕಟ್ಟ ಕಡೆಯ ಶ್ರೀಸಾಮಾನ್ಯನಿಗೆ ತಲುಪಿಸುವ ಕೆಲಸ ಮಾಡಿದಲ್ಲಿ ಸರ್ಕಾರಿ ಯೋಜನೆ ಯಶಸ್ವಿಯಾಗಲಿದೆ ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರಿ ನೌಕರರಿಗೂ ಅನುಕೂಲವಾಗಿದೆ. ಇನ್ನೂ 7ನೇ ವೇತನ ಆಯೋಗ ಜಾರಿ ಹಾಗೂ NPS ನಿಂದ OPS ಮಾಡುವ ವಿಚಾರದಲ್ಲಿ ಅದನ್ನು ಸಹಾನುಭೂತಿಯಿಂದ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಯಾವುದೇ ಹೋರಾಟವಿಲ್ಲದೆ ಅತ್ಯಂತ ಪ್ರೀತಿ, ವಿಶ್ವಾಸದಿಂದ ಮನಸ್ಸು ಗೆದ್ದು NPS, OPS ಮಾಡುವ ವಿಚಾರದಲ್ಲಿ ಸರ್ಕಾರ ನೀಡಬೇಕು. ರಾಜ್ಯದಲ್ಲಿ 3 ಲಕ್ಷ NPS ನೌಕರರು ಇದ್ದಾರೆ. ಇದರಿಂದ ಅವರ ಕುಟುಂಬಕ್ಕೆ ಭದ್ರತೆ ಸಿಗಲಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪ್ರತಿವರ್ಷ ರಾಜ್ಯದಲ್ಲಿ 8,000 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 250 ಮಕ್ಕಳಿಗೆ ತಲಾ 1 ಸಾವಿರ ನಗದು, ಸ್ಮರಣಿಕೆ ನೀಡಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದರು.
0 Response to 7ನೇ ವೇತನ ಆಯೋಗ ಹಾಗೂ NPS ಜಾರಿಗೆ ವಿಚಾರದಲ್ಲಿ ಷಡಕ್ಷರಿ ಅವರ ಮಹತ್ವದ ಹೇಳಿಕೆ
Post a Comment