-->

Responsive Ads

Responsive Ads



ಕಂಠ ಪೂರ್ತಿ ಕುಡಿದು ಜ್ಞಾನ ದೇಗುಲದಲ್ಲೇ ಕುಡುಕ ಶಿಕ್ಷಕನ ಅವಾಂತರ


ಉಡುಪಿಯ್ಲಲಿ ಜ್ಞಾನ ದೇಗುಲದಲ್ಲಿ ಕುಡುಕ ಶಿಕ್ಷಕನ ಅವಾಂತರ. ಕಂಠಪೂರ್ತಿ ಕುಡಿದು ಶಾಲೆಯ ಜಗಲಿಯಲ್ಲಿ ಮಲಗಿದ ಶಿಕ್ಷಕ.

ಉಡುಪಿ: ಕುಡುಕ ಶಿಕ್ಷಕನೋರ್ವ ಕಂಠಪೂರ್ತಿ ಕುಡಿದು ಶಾಲೆಯ ಜಗಲಿಯಲ್ಲಿ ಮಲಗಿ ಅವಾಂತರ ಸೃಷ್ಟಿಸಿರುವ ಘಟನೆ ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ ನಡೆದಿದೆ.

ಪೆರ್ಡೂರು ಗ್ರಾಮದ ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣಮೂರ್ತಿ ಎಂಬ ಶಿಕ್ಷಕ ಮದ್ಯ ಸೇವಿಸಿ ಜಗಲಿಯಲ್ಲಿ ಮಲಗಿದ್ದಾರೆ. ಶಿಕ್ಷಕನ‌ ಅವಾಂತರವನ್ನು ವಿಡಿಯೋ ಮಾಡಿದ ಸ್ಥಳೀಯರು ಶಿಕ್ಷಕನನ್ನು ಕೂಡಲೇ ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.


ರಾಜ್ಯದ ಹಳ್ಳಿಗಳಲ್ಲಿರುವ ದೇವಸ್ಥಾನಗಳ ಮೇಲೆ ಕಳ್ಳರ ಕಣ್ಣು; 334 ದೇವಾಲಯ ಕಳವು ಪ್ರಕರಣ ದಾಖಲು

ಬೆಂಗಳೂರು:- ರಾಜ್ಯದಲ್ಲಿ ಹಳ್ಳಿಲ್ಲಿರುವ ದೇವಾಲಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ದೇವಸ್ಥಾನದಲ್ಲಿ ಹುಂಡಿ ಹಾಗೂ ಚಿನ್ನಾಭರಣ ಲೂಟಿ ಮಾಡುತ್ತಿದ್ದಾರೆ.

ಪ್ರತಿನಿತ್ಯ ರಾಜ್ಯದಲ್ಲಿ ಸುಮಾರು ಒಂದು ದೇವಾಲಯದಲ್ಲಿ ಕನ್ನ ಹಾಕಿರುವ ಪ್ರಕರಣ ದಾಖಲಾಗುತ್ತಿದೆ.ಪೊಲೀಸ್‌ ಇಲಾಖೆಯ ಅಧಿಕೃತ ಅಂಕಿ-ಅಂಶಗಳ ಅನ್ವಯ, ನವೆಂಬರ್‌ ಅಂತ್ಯಕ್ಕೆ ರಾಜ್ಯದಲ್ಲಿ334 ದೇವಾಲಯ ಕಳವು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಜುಲೈನಲ್ಲಿಅತ್ಯಧಿಕ 50 ಕೇಸ್‌ಗಳು, ಅಕ್ಟೋಬರ್‌ನಲ್ಲಿ44, ಸೆಪ್ಪೆಂಬರ್‌ನಲ್ಲಿ30, ಆಗಸ್ಟ್‌ ತಿಂಗಳಲ್ಲಿ33 ಪ್ರಕರಣಗಳು ಕಳವು, ರಾಬರಿ ಕೇಸ್‌ಗಳು ವರದಿಯಾಗಿವೆ.
ತುಮಕೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಳ್ಳರು ಕೈ ಚಳಕ ತೋರಿದ್ದಾರೆ.

0 Response to ಕಂಠ ಪೂರ್ತಿ ಕುಡಿದು ಜ್ಞಾನ ದೇಗುಲದಲ್ಲೇ ಕುಡುಕ ಶಿಕ್ಷಕನ ಅವಾಂತರ

Post a Comment

Advertise