-->


ಡಿಗ್ರಿ ಪಾಸಾಗಿದ್ರೆ ರಾಜ್ಯ ಸರ್ಕಾರಿ ನೌಕರಿ-ಜನವರಿ 2ರೊಳಗೆ ರೆಸ್ಯೂಮ್​ ಕಳುಹಿಸಿ

KHPT Recruitment 2023: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್(Karnataka Health Promotion Trust) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 12 ಫೀಲ್ಡ್​ ಇನ್ವೆಸ್ಟಿಗೇಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ.

ಜನವರಿ 2, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last date)ವಾಗಿದೆ. ಇ-ಮೇಲ್ ಮಾಡುವ ಮೂಲಕ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತುಮಕೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  1. ಸಂಸ್ಥೆ:- ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್
  2. ಹುದ್ದೆ:- ಫೀಲ್ಡ್​ ಇನ್ವೆಸ್ಟಿಗೇಟರ
  3. ವೇತನ:- ನಿಯಮಾನುಸಾರ
  4. ಉದ್ಯೋಗದ ಸ್ಥಳ:- ತುಮಕೂರು
  5. ಒಟ್ಟು ಹುದ್ದೆ:- 12

ವಿದ್ಯಾರ್ಹತೆ: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸನ್ನು ನಿಗದಿಪಡಿಸಿಲ್ಲ. ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ
ಸಂದರ್ಶನ

ವೇತನ: ಫೀಲ್ಡ್​ ಇನ್ವೆಸ್ಟಿಗೇಟರ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ತಿಂಗಳಿಗೆ ನಿಯಮಾನುಸಾರ ವೇತನ ಕೊಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆ, ಶೈಕ್ಷಣಿಕ ದಾಖಲಾತಿಗಳು, ಅನುಭವ ಪ್ರಮಾಣ ಪತ್ರ, ಗುರುತಿನ ಚೀಟಿ, ಇತ್ತೀಚಿನ ಭಾವಚಿತ್ರ ಹಾಗೂ ರೆಸ್ಯೂಮ್​ನ್ನು ಇ-ಮೇಲ್ ಐಡಿ jobs@khpt.org ಗೆ ಜನವರಿ 2ರೊಳಗೆ ಕಳುಹಿಸಿ.

ಪ್ರಮುಖ ದಿನಾಂಕಗಳು:

  1. ನೋಟಿಫಿಕೇಶನ್ ಬಿಡುಗಡೆ ದಿನಾಂಕ: 22/12/2022
  2. ಇ-ಮೇಲ್ ಮಾಡಲು ಕೊನೆಯ ದಿನ: 02/01/2023

0 Response to ಡಿಗ್ರಿ ಪಾಸಾಗಿದ್ರೆ ರಾಜ್ಯ ಸರ್ಕಾರಿ ನೌಕರಿ-ಜನವರಿ 2ರೊಳಗೆ ರೆಸ್ಯೂಮ್​ ಕಳುಹಿಸಿ

Post a Comment

Advertise